ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಅರ್ನ್‌ಸ್ಟ್ ಪ್ರಿಂಗ್‌ಷೈಮ್‌ರವರು ೧೮೫೯ರ ಜೂನ್ ೧೧ರಂದು ಜರ್ಮನಿಯ ಬ್ರೆಸ್ಲಾದಲ್ಲಿ (ಅಂದರೆ ಈಗ ಪೋಲೆಂಡಿನಲ್ಲಿರುವ ವ್ರೊಕ್ಲಾದಲ್ಲಿ) ಜನಿಸಿದರು. ಪ್ರಿಂಗ್‌ಷೈಮ್‌ರವರು ೧೮೮೧ರಲ್ಲಿ ಅವಕೆಂಪು ರೋಹಿತಮಾಪಕವನ್ನು ( ) ಕಂಡುಹಿಡಿದರು. ಅಗೋಚರ ಬೆಳಕಿನ ಅವಕೆಂಪು ಪ್ರದೇಶದ ತರಂಗದೂರಗಳನ್ನು ಮೊದಲ ಬಾರಿಗೆ ನಿಖರವಾಗಿ ಅಳೆಯಲು ಆ ಮಾಪಕದಿಂದ ಸಾಧ್ಯವಾಯಿತು. ಪ್ರಿಂಗ್‌ಷೈಮ್‌ರವರು ಇತರ ವಿಜ್ಞಾನಿಗಳ ಜೊತೆ ಸೇರಿ ಕಪ್ಪು ಕಾಯಗಳ ವಿಕಿರಣಗಳ ಬಗ್ಗೆ ಅನೇಕ ವಿಷಯಗಳನ್ನು ಸಂಶೋಧಿಸಿದರು. ಅವರ ಸಂಶೋಧನೆಗಳು ಕ್ವಾಂಟಮ್ ಸಿದ್ಧಾಂತಗಳಿಗೆ ತಳಹದಿಯಾದವು. ಪ್ರಿಂಗ್‌ಷೈಮ್‌ರವರು ೧೯೧೭ರ ಜೂನ್ ೨೮ರಂದು ಬ್ರೆಸ್ಲಾದಲ್ಲಿ ನಿಧನರಾದರು. == ಉಲ್ಲೇಖಗಳು ==